ಕವನಗಳು
ಮಣೆ
Jul 04, 2025

ಪ್ರತಿಭೆಗೆ ಕೊಡುವ ಮನ್ನಣೆ
ವಿವಾದಕೆ ಹಾಕದಿರೋಣ ಮಣೆ
ಹಣೆಬರಹಕೆ ಯಾರಿಹರು ಹೊಣೆ
ಭಗವಂತನ ಮಹಿಮೆಗುಂಟೆ ಎಣೆ
ನಿತ್ಯ ಸತ್ಯವೇ ನಿಜವಾದ ದರುಶನ
ಪರೋಪಕಾರಕ್ಕೆ ಮುಡಿಪಿಡುವ ಜೀವನ
ಮನಕಿರಲಿ ಭಗವನ್ನಾಮದ ಕೀರ್ತನ
ಧರ್ಮವೇ ಮೋಕ್ಷಕ್ಕೆ ಸಾಧನ
ಬದುಕಿನಲಿ ಹರಡಿರಲಿ ಪ್ರೀತಿ
ಮಾನವತೆಯೇ ಬಾಳಿನ ನೀತಿ
ಕಷ್ಟಗಳ ಮಣಿಸುವ ಛಾತಿ
ಸರಳತೆಯೇ ಜೀವನದ ರೀತಿ
-ಚೇತನ ಭಾರ್ಗವ
ಇತ್ತೀಚಿನ ಕಾಮೆಂಟ್‌ಗಳು