ನಿರೂಪಣಾ ಕವನ
ಹುಳಿ ದ್ರಾಕ್ಷಿ
Apr 08, 2026
ಹುಳಿ ದ್ರಾಕ್ಷಿ
ಕಾಡಿನ ದಾರಿಯಲ್ಲಿ ನರಿ ನಡೆದು,
ಕಣ್ಣು ತುಂಬ ದ್ರಾಕ್ಷಿ ಕಂಡು ನಿಂತು,
ಮೇಲೇರಿ ಹೊಕ್ಕು ಹಿಡಿಯಲು ಯತ್ನಿಸಿ,
ಕೈ ಸೇರದೆ ಹಿಂತಿರುಗಿ ನಿಟ್ಟುಸಿರಿಟ್ಟು…
“ಹುಳಿ ದ್ರಾಕ್ಷಿ!” ಎಂದು ಹೇಳಿ ಹೋದಳು,
ತಾನು ಸೋತುದನ್ನು ಮರೆಮಾಡಿದಳು,
ಅಸಾಧ್ಯವಾದುದು ಕಹಿ ಎಂದುಕೊಂಡು,
ಮನದೊಳಗೆ ಮೌನವಾಗಿ ಕುಗ್ಗಿದಳು…
ಅತ್ತ ಹುಲಿ ಬಂದು ಧೈರ್ಯ ತೋರಿಸಿ,
ಒಮ್ಮೆ ಜಿಗಿದು ದ್ರಾಕ್ಷಿ ಕಿತ್ತು ತಿನ್ನು
ಸಾಧನೆಯ ಸಿಹಿ ರುಚಿ ಅನುಭವಿಸಿ
ಇನ್ನೊಮ್ಮೆ ಜಿಗಿದು ನೋಡು ಎಂದಿತು
ಜೀವನದಲ್ಲಿ ದೊರೆಯದದ್ದು ಹುಳಿ ಅಲ್ಲ,
ಪ್ರಯತ್ನವೇ ಸಿಹಿಯ ದಾರಿ ಹೇಳುತ್ತದೆ,
ಧೈರ್ಯ ಇದ್ದರೆ ಫಲ ಸಿಗುವುದು ಖಂಡಿತ,
ನಂಬಿಕೆ ಇಟ್ಟರೆ ಜಯ ನಮ್ಮದಾಗುತ್ತದೆ…
ನರಿ ಮತ್ತೊಮ್ಮೆ ಜಿಗಿದು ಹಾರಿ
ದ್ರಾಕ್ಷಿ ತಿಂದು ಸಿಹಿ ಎಂದು ನಕ್ಕಿತು
ಲೇಖಕಿ ಗಾಯತ್ರಿ ಎಸ್ ಎನ್ ಶಿವಮೊಗ್ಗ
ಇತ್ತೀಚಿನ ಕಾಮೆಂಟ್‌ಗಳು