ಕವನಗಳು
ಪುಟಾಣಿಗಳ ಆಟ
Sep 07, 2025
ಬಾಲು ಚಿಂಟು ಕೂಡಿ ಆಡಲು
ಕಿಟಿಕಿಯೊಳಗಿಂದ ಇಣುಕುತಿವೆ
ಮುಗ್ಧ ಮನಗಳ ಗೋಲಿ ಕಂಗಳು
ಆಡುವ ಕನಸನು ಕಾಣುತಿವೆ!
ಎರಡು ಪುಟಾಣಿಗಳ ಪುಟ್ಟ ಕೈಗಳು
ಕಿಂಡಿಯೊಳಗಿಂದ ಹೊರಗೆ ಜಾರುತಿವೆ
ಜೊತೆಗೂಡಿ ಹೊರಗಡೆ ಆಟವಾಡಲು
ಹೊಟ್ಟೆಯ ಹಸಿವು ಕಾಣೆಯಾಗಿದೆ!
ಜೊತೆಗೂಡಿ ಆಡಿ ಹೊತ್ತು ಕಳೆಯಲು
ಮುದ್ದು ಮನಸುಗಳಾಸೆ ಪೂರೈಸಿದೆ
ಕಿರಿಯರಿಬ್ಬರ ಆಟವನು ನೋಡುತಿರಲು
ಹಿರಿಯರ ಮೊಗದಲ್ಲೂ ನಗು ಅರಳಿದೆ!
ಧನ್ಯವಾದಗಳು
✍️ ಪ್ರಜ್ಞಾ ರವೀಶ್.
ಇತ್ತೀಚಿನ ಕಾಮೆಂಟ್‌ಗಳು