ಕವನಗಳು
ದಯೆ ತೋರಿ ಕಾಪಾಡು
Feb 03, 2026
ನಿನ್ನ ಮಾತ ಕೇಳದೆ,
ದಾರಿ ತಪ್ಪಿದೆನೆಂದು,
ನನ್ನ ಕೈಯ ಬಿಡಬೇಡ ನನ್ನಪ್ಪ
ಒಮ್ಮೆ ನನ್ನ ಮೇಲೆ ದಯೆ ತೋರಿ
ಮತ್ತೊಮ್ಮೆ ಮುನ್ನಡೆಸುವೆಯ ನನ್ನಪ್ಪ.
ನಿನ್ನ ಕೈ ತುತ್ತಿಗೆ
ನಾ ಮೋಸ ಮಾಡಲಿಲ್ಲ ನನ್ನಮ್ಮ
ಪರಿಸ್ಥಿತಿಯ ಕೈಯಲ್ಲಿ ಸಿಕ್ಕಿ
ನಾ ಹಾಗೆ ಮಾಡಬೇಕಾಯಿತ್ತು ನನ್ನಮ್ಮ
ಒಮ್ಮೆ ದಯೆ ತೋರಿ
ಮತ್ತೊಮ್ಮೆ ಕೈತುತ್ತ ನೀಡುವೆಯ ನನ್ನಮ್ಮ.
ನಿನ್ನ ಗೆಳೆತನದ ಮೇಲೆ ಸಂಶಯ ಪಟ್ಟೆನೆಂದು
ದೂರ ಸರಿಯಬೇಡ ನನ್ನಗೆಳತಿ
ಒಮ್ಮೆ ದಯೆ ತೋರು,
ನಿನ್ನೊಂದಗಿನ ಸ್ನೇಹವ
ಕಾಪಾಡಿ ಕೊಳ್ಳುವೆನು ನನ್ನ ಗೆಳತಿ.
ನನ್ನ ಸೃಷ್ಟಿಕರ್ತ ನೀನಯ್ಯ
ನನ್ನ ಹಣೆಬರಹವ ಬರದ ಶಿಲ್ಪಿ ನೀನಯ್ಯ
ನನ್ನ ಸರಿ-ತಪ್ಪುಗಳನ್ನು ಲೆಕ್ಕಾಚಾರ ಮಾಡುವ ರೂವಾರಿ ನೀನಯ್ಯ
ನೀನೆ ನನ್ನ ಮೇಲೆ ದಯೆ ತೋರದಿದ್ದಾರೆ
ಮತ್ಯಾರ ನನ್ನ ಕಾಪಾಡಿ ಕೈ ಹಿಡಿಯುವವರಯ್ಯ,
ಮತ್ತೊಮ್ಮೆ ಅವಕಾಶವ ಕೊಡು ನನ್ನಯ್ಯ
ಎಲ್ಲವನ್ನು ಸರಿಪಡಿಸಿ ಕಾಪಾಡಿಕೊಳ್ಳುವೆ ನನ್ನಯ್ಯ.
✍️ ಯಶಸ್ವಿನಿ ಹೆಚ್. ವಿ.
ಇತ್ತೀಚಿನ ಕಾಮೆಂಟ್‌ಗಳು