ಕವನಗಳು

ನಿಸರ್ಗದ ಚೆಲುವು

Feb 04, 2026

ನಿನ್ನ ಸೌಂದರ್ಯವ 

ನಾ ಏನೆಂದು ವರ್ಣಿಸಲಿ  
ಕಂಗಳಿಗೆ ಕುಕ್ಕುವಂತಿರುವ 
ನಿನ್ನ ಆಕರ್ಷಣೆಯ 
 ನಾ ಎಷ್ಟೆಂದು ಶೃಂಗರಿಸಲಿ 

ಮುಗಿಲೊಳಗಿನ ಸೊಬಗಿಗೆ 
ದೃಷ್ಟಿ ಬಟ್ಟಂತಿರುವ 
 ಸೂರ್ಯ ಚಂದ್ರ ನಕ್ಷತ್ರಗಳ ಅಂದವ
 ನಾ ಏನೆಂದು ಹೊಗಳಲಿ

 ಪೃಥ್ವಿಯ ಆವರಿಸಿಕೊಂಡಿರುವ
 ಶಕ್ತಿಯಂತೆ ಕಂಗೊಳಿಸುವ
ಬೆಟ್ಟಗುಡ್ಡ ಪರ್ವತ, 
 ಗಿಡ ಮರ ಬಳ್ಳಿ,
ನದಿ ಸಮುದ್ರ ಸಾಗರ,
ಸಕಲ ಜೀವ ಸಂಕುಲಗಳ
 ಚೆಂದವ ಎಷ್ಟೆಂದು ಬಣ್ಣಿಸಲಿ 

ನಿನ್ನ ಚೆಲುವ 
ಎಷ್ಟು ವರ್ಣಿಸಿದರು ಸಾಲದು
 ಪದಗಳಿಗೆ ಮಿಗಿಲಾದದ್ದು 
ನಿನ್ನ ನಿಸರ್ಗದ ಮಡಿಲು.

         ✍️ ಯಶಸ್ವಿನಿ ಹೆಚ್‌. ವಿ.

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ