ನಿರೂಪಣಾ ಕವನ

ಹೆದರಿಕೆ

Jan 12, 2026

ಪ್ರಾಮಾಣಿಕತೆ ನೀತಿಯತೆ ಮಾರ್ಗದಿ
ಸಾಗುವ ಜನಕೆ ಈಗೀಗ ಹೆದರಿಕೆ
ಸತ್ಯದ ಹಾದಿಯಲಿ ಹೊರಟರೆ ಧೈರ್ಯದಿ
ಸಂಚು ರೂಪಿಸಿ ನೀಡುವರು ಬೆದರಿಕೆ

ಆಧುನಿಕ ಜಗದಲಿ ಮೋಸವೆ ಕುಣಿದು
ಕುಪ್ಪಳಿಸಿದೆ ವಂಚನೆ ಬಲೆಯ ಬೀಸಿ
ಕುಹಕ ನಗೆಯ ಬೀರಿ ಹಲ್ಲು ಕಿಸಿದು
ಬೆನ್ನಿಗೆ ಚೂರಿ ಹಾಕುವರು ಕಾಡಿಸಿ

ಬದುಕಲು ಹೆದರಿಕೆ ಜಗದಲಿ ನಿತ್ಯ
ಕಾರಣವೇ ತಾಂಡವಾಡುತಿದೆ ಮಿಥ್ಯ
ಪ್ರತಿಕ್ಷಣವೂ ಭಯದ ಭೀತಿ ಮನದಿ
ಹೇಗಿದ್ದರೂ ಬಾಳಬೇಕು ಆತ್ಮಸ್ಥೈರ್ಯದಿ

ಅವಿನಾಶ ಸೆರೆಮನಿ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ