ಕವನಗಳು
ಕಿನ್ನರಿಯ ಕೋರಿಕೆ
Nov 04, 2025
ಚಿತ್ರಕ್ಕೊಂದು ಕವನ
ಮುದ್ದು ಕಿನ್ನರಿಯ ರಮಿಸುತ್ತಾ ಹೇಳಿದೆ ಅಂದು
ನೀ ಏನು ಕೇಳಿದರೂ ತಂದುಕೊಡುವೆನೆಂದು
ಚುಕ್ಕಿ ತಾರೆ ಏನೇ ಕೇಳು ನಿನ್ನ ಅಂಗೈಲಿಡುವೆನೆಂದು
ಹಠ ಹಿಡಿದೇ ಬಿಟ್ಟಳು ಚುಕ್ಕಿ ತಾರೆ ಚಂದಮಾಮ ಬೇಕೇಬೇಕೆಂದು
ಯೋಚಿಸಿ ಹೇಳಿದೆ ನಿನ್ನ ಅಂಗೈ ನೀಡೆಂದು
ಅರಿತಿರಲಿಲ್ಲವಳು ಮದರಂಗಿಯಲ್ಲಿ ಚುಕ್ಕಿ ತಾರೆ ಬಿಡಿಸುವೆನೆಂದು
ತಿಳಿದಿತ್ತೆನಗೆ ಅವಳಿಗೆ ಮದರಂಗಿ ಚಿತ್ತಾರ ಇಷ್ಟವೆಂದು
ಅಂಗೈಯಲ್ಲಿ ಚುಕ್ಕಿ ತಾರೆ ಚಿತ್ತಾರ ಕಂಡು ಕುಣಿದಾಡಿದಳಂದು
ನಸುನಕ್ಕೆನು ಕೊಟ್ಟ ಮಾತು ಹೀಗೆ ಈಡೇರಿಸಿದೇನೆಂದು
ನಾಗರತಿ ಚಿಂತಾಮಣಿ
ಇತ್ತೀಚಿನ ಕಾಮೆಂಟ್‌ಗಳು