ಕವನಗಳು

ರಂಗು

Mar 13, 2025
star 5.0  (39 ಓದು) share ಹಂಚಿಕೊಳ್ಳಿ

ರಂಗು

ಕಪ್ಪು ಬಿಳುಪಿನ ಕಾಲ ಮುಗಿದಿದೆ 
ರಂಗು ರಂಗಿನ ಕಾಲ ಈಗ ನಡೆದಿದೆ 
ಸರಳತೆಯ ಬದುಕೆಲ್ಲಿ 
ಆಡಂಬರದ ಸೆರೆಯಲ್ಲಿ 
ಆಗಿದ್ದ ನಿಜವಾದ ಖುಷಿ ಈಗಿಲ್ಲ 
ಯಾರಿಗೂ ಕುಳಿತು ಹರಟಲು ಸಮಯವಿಲ್ಲ
ಪ್ರಪಂಚ ಐಷಾರಾಮದ ಹಿಂದೆ ಓಡುತಿದೆಯಲ್ಲ 
ಮಜಾ ಮೋಜು ಅತಿಯಾಗಿ 
ಇರುವುದೆಲ್ಲ ಬರಿ ತೋರಿಕೆಯಾಗಿ 
ಶೋಕಿಯ ಮಾಯಾಲೋಕಕೆ ಮರುಳಾಗಿ 
ಮತ್ತೆ ಬರಬೇಕಿದೆ ಮನುಷ್ಯ ಮನುಷ್ಯನಿಗಾಗಿ 
ಜೀವಿಸುವ ಕಾಲ 
ಸಾಕಾಗಿದೆ ಯಂತ್ರೋಪಕರಣಗಳ ಯಾಂತ್ರಿಕ ಜಾಲ 
ಪ್ರಕೃತಿಯೇ ಬಲ 
ಬಾಗಿ ಬಾಳಿದರೆ ಉಳಿಯುವುದು ಮನುಕುಲ 

ಇತ್ತೀಚಿನ ಕಾಮೆಂಟ್‌ಗಳು
ಇದನ್ನು ವರದಿ ಮಾಡಿ